Tel: 7676775624 | Mail: info@yellowandred.in

Language: EN KAN

    Follow us :


ಹೊಂಗನೂರು ಕೆರೆ ಕೋಡಿ ಹರಿಯಲು ಕ್ಷಣಗಣನೆ
ಹೊಂಗನೂರು ಕೆರೆ ಕೋಡಿ ಹರಿಯಲು ಕ್ಷಣಗಣನೆ

  ಸತತ ಹದಿನೆಂಟು ವರ್ಷಗಳಿಂದ ಬಿರುಕು ಬಿಟ್ಟು ಒಣಗಿ ನಿಂತ ಐತಿಹಾಸಿಕ ಹೊಂಗನೂರು ಕೆರೆ ಸಂಪೂರ್ಣ ತುಂಬಿದ್ದು ಕೋಡಿ ಹರಿಯಲು ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆಯಾದರೂ ಹಲವಾರು ಸಮಸ್ಯೆಗಳನ್ನು ಸಹ ತನ್ನ ಬಗಲಲ್ಲಿರಿಸಿಕೊಂಡು ಜೀವಸಂಕುಲಕ್ಕೆ ಮಾರಕವಾಗುತ್ತಿದೆ. ಹದಿನೆಂಟು ವರ್ಷಗಳ ಹಿಂದೆ ಎರಡು ಬಾರಿ ಕೆರೆ ತುಂಬಿತ್ತಾದರೂ ಕೋಡಿ ಹರಿಯುವ ಮುನ್ನವೇ ಮಳೆ ಸ್ಥಗಿತಗೊಂಡಿದ್ದರಿಂದ ಹೊಂಗನೂರು ಮತ್ತು ಸುತ್ತಲಿನ ಗ್ರಾಮಸ್ಥರು ಅಂದಿನ ಕಾಲಕ್ಕೆ ನಿರಾಸೆಗೊಂಡಿದ್ದಾಗಿ

ದೀಪಾವಳಿ ಹಬ್ಬಕ್ಕೆ ಮದ್ದು ಸಿಡಿಸಲು ಇನ್ನೂ ಸಿಗದ ಅನುಮತಿ ಅಂಗಡಿ ಮಾಲೀಕರಿಗೆ ಕಸಿವಿಸಿ
ದೀಪಾವಳಿ ಹಬ್ಬಕ್ಕೆ ಮದ್ದು ಸಿಡಿಸಲು ಇನ್ನೂ ಸಿಗದ ಅನುಮತಿ ಅಂಗಡಿ ಮಾಲೀಕರಿಗೆ ಕಸಿವಿಸಿ

ಬೆಳಕಿನ ಹಬ್ಬ ದೀಪಾವಳಿಗೆ ದೀಪಗಳಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಸಿಡಿಸುವ ಪಟಾಕಿಗಳಿಗೂ ಇದೆ, ಪೌರಾಣಿಕ ಐತಿಹ್ಯವುಳ್ಳ ದೀವಳಿಗೆ ಹಬ್ಬಕ್ಕೆ ನಗರದಲ್ಲಿ ಒಂದು ದಿನ ಮುಂಚಿತವಾಗಿಯೇ ಪಟಾಕಿ ಅಂಗಡಿಗಳು ತೆರೆಯುವುದು ವಾಡಿಕೆಯಾದರು ಹಲವಾರು ಕಾರಣಗಳಿಂದ ಈ ವರ್ಷ ಒಂದು ಅಂಗಡಿಯೂ ತೆರೆಯದೆ ಇರುವುದು ಪಟಾಕಿ ಪ್ರಿಯರಿಗೆ ಮತ್ತು ಮಕ್ಕಳಿಗೆ ನಿರಾಸೆ ಮೂಡಿಸಿದೆ. ಇದುವರೆಗೂ ನಗರಸಭೆಯ ಆವರಣದಲ್ಲಿ ತಾತ್ಕಾಲಿಕವಾಗಿ ಅಂಗಡಿ ತೆರೆಯಲು ಅನುಮತಿ ನೀಡಲಾಗುತ್ತಿತ್ತು, ನಗರಸಭೆಯ ಆವರಣದಲ್ಲ

ರೋಟರಿ ಕ್ಲಬ್ ಮತ್ತು ಶಾಲಾ ಮಕ್ಕಳಿಂದ ಸುರಕ್ಷತಾ ಚಾಲನೆ ಮತ್ತು ಪರಿಸರ ಜಾಗೃತಿ
ರೋಟರಿ ಕ್ಲಬ್ ಮತ್ತು ಶಾಲಾ ಮಕ್ಕಳಿಂದ ಸುರಕ್ಷತಾ ಚಾಲನೆ ಮತ್ತು ಪರಿಸರ ಜಾಗೃತಿ

ನಗರದ ರೋಟರಿ ಕ್ಲಬ್ ಸದಸ್ಯರು ಮತ್ತು ರೋಟರಿ ಶಾಲಾ ಮಕ್ಕಳು ಸುರಕ್ಷತಾ ಚಾಲನೆ ಮಾಡುವುದು ಹಾಗೂ ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ರೋಟರಿ ಶಾಲೆಯಿಂದ ಜಾಥಾ ಹೊರಟು ನಗರದ ಪೋಲಿಸ್ ಠಾಣೆಯ ಮುಂಭಾಗ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಚಲಿಸುವ ವಾಹನಗಳ ಚಾಲಕರಿಗೆ ಸುರಕ್ಷತಾ ಚಾಲನೆ ಮತ್ತು ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಹಂಚಿ ನಂತರ ಎಂ ಜಿ ರಸ್ತೆ, ಅಂಚೆ ಕಛೇರಿ ರಸ್ತೆ ಮೂಲಕ ರೋಟರಿ

ಹಾರಿಜಾನ್ ಲೇಕ್ ವ್ಯೂವ್ ಶಾಲೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ
ಹಾರಿಜಾನ್ ಲೇಕ್ ವ್ಯೂವ್ ಶಾಲೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಇಲ್ಲಿನ ಹಾರಿಜಾನ್‌ಲೇಕ್ ವ್ಯೂವ್ ಪಬ್ಲಿಕ್ ಶಾಲೆಯು ಈ ಸಾರಿಯ ೬೩ನೇ ಕನ್ನಡ ರಾಜ್ಯೋತ್ಸವವನ್ನು ನುಡಿ ವೈಭವ ೨೦೧೮ ಆಗಿ ಆಚರಿಸಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚನ್ನಪಟ್ಟಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್. ಸೀತಾ ರಾಮು ಅವರು ಮಾತನಾಡಿ, ನಮ್ಮ ವಿದ್ಯಾರ್ಥಿ ಸಮೂಹ ಇಂದು ಮೊಬೈಲ್ ಹಾಗೂ ದೂರದರ್ಶನಕ್ಕೆ ಮೊರೆ ಹೋಗುತ್ತಿದ್ದಾರೆ. ಅವುಗಳು ಉತ್ತಮ ಸಂಸ್ಕೃತಿ ಯನ್ನು ಕಲಿಸುವುದಿಲ್ಲ. ಅದಕ್ಕೆ ನಮ್ಮ ಕವಿಗಳು, ಬರಹಗಾರರು, ವಿಚಾರ ವಂತರು

ಶೇಕಡಾ ೭೦ ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿರುವ ತಾಲ್ಲೂಕು ಪಂಚಾಯತ್, ಅಭಿವೃದ್ಧಿಯತ್ತ ಕೊಂಡೊಯ್ಯುವ ಭರವಸೆಯಲ್ಲಿ ಅಧಿಕಾರಿ
ಶೇಕಡಾ ೭೦ ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿರುವ ತಾಲ್ಲೂಕು ಪಂಚಾಯತ್, ಅಭಿವೃದ್ಧಿಯತ್ತ ಕೊಂಡೊಯ್ಯುವ ಭರವಸೆಯಲ್ಲಿ ಅಧಿಕಾರಿ

ತಾಲ್ಲೂಕು ಪಂಚಾಯತ್ ಇಲಾಖೆಯು ಈಗ ಸುಧಾರಿಸುತ್ತಿದೆ, ತಾಲ್ಲೂಕಿಗೆ ಸೇರಿದ ಮೂವತ್ತೆರಡು ಗ್ರಾಮ ಪಂಚಾಯತಿಗಳು ಸಹ ಉತ್ತಮವಾಗಿ ಕೆಲಸ ನಿರ್ವಹಿಸಲು ಸಶಕ್ತವಾಗಿವೆ, ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿ ಹದಿನೇಳು ಹುದ್ದೆಗಳು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಪ್ಪತ್ತೆಂಟು ಹುದ್ದೆಗಳು ಖಾಲಿ ಇದ್ದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಲ್ಲಾ ಸಿಬ್ಬಂದಿಗಳು ಶೀಘ್ರವಾಗಿ ದೊರೆತರೆ ತಾಲ್ಲೂಕು ಪಂಚಾಯತ್ ನ್ನು ಉನ್ನತ ದರ್ಜೆಗೆ ಏರಿಸಲು ಶ್ರಮಿಸುತ್ತೇನೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ

ತಗಚಗೆರೆ ಮಾಸ್ತಮ್ಮ ಮಂದಿರದಲ್ಲಿ ಚಿತ್ರೀಕರಣಕ್ಕೆ ಚಾಲನೆ
ತಗಚಗೆರೆ ಮಾಸ್ತಮ್ಮ ಮಂದಿರದಲ್ಲಿ ಚಿತ್ರೀಕರಣಕ್ಕೆ ಚಾಲನೆ

ಅಮೃತ ಪ್ರೊಡಕ್ಷನ್ಸ್‌ ರವರ ಚೊಚ್ಚಲ ಕಾಣಿಕೆಯಾಗಿ ಪ್ರೊಡಕ್ಷನ್ ನಂ ೧ ಎಂಬ ಕನ್ನಡ ಚಿತ್ರದ ಚಿತ್ರೀಕರಣಕ್ಕೆ ತಾಲ್ಲೂಕಿನ ತಗಚಗೆರೆ ಗ್ರಾಮದ ಶ್ರೀ ಮಾಸ್ತಮ್ಮ ದೇವಿಯ ಸನ್ನಿಧಿಯಲ್ಲಿ ಗಣ್ಯರು ಚಾಲನೆ ನೀಡಿದರು. ಅನೇಕ ಹೊಸ ನಟ ನಟಿಯರ ಜೊತೆಗೆ ಹಿರಿಯ ಸಿನಿಮಾ ಕಲಾವಿದರನ್ನು ಸೇರಿಸಿ ವಿಭಿನ್ನವಾದ ಸಾಮಾಜಿಕ ಕಳಕಳಿಯ ಕಾಳಜಿಯುಳ್ಳ ಕಥೆಯನ್ನು ರಚಿಸಿದ್ದೇನೆ, ಮಾಸ್ತಮ್ಮ ದೇವಿಯ ಕೃಪೆಯಿಂದ ಯಾವುದೇ ವಿಘ್ಗಗಳು ಬಾರದೆ ಚಿತ್ರೀಕರಣ ಸಾಗಲಿದೆ, ಅದಕ್ಕೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ

ವರ್ತಕರು ಮತ್ತು ಕೈಗಾರಿಕೋದ್ಯಮಿಗಳ ಸಂಘದಿಂದ ಪ್ರಥಮ ಕನ್ನಡ ರಾಜ್ಯೋತ್ಸವ
ವರ್ತಕರು ಮತ್ತು ಕೈಗಾರಿಕೋದ್ಯಮಿಗಳ ಸಂಘದಿಂದ ಪ್ರಥಮ ಕನ್ನಡ ರಾಜ್ಯೋತ್ಸವ

ಇಂದು ನಗರದ ವರ್ತಕರ ಹೃದಯ ಭಾಗವಾದ ಪೇಟೆಬೀದಿಯ ನಿಂಬೆಹಣ್ಣು ವೃತ್ತದಲ್ಲಿ ಚನ್ನಪಟ್ಟಣ ತಾಲ್ಲೂಕಿನ ವರ್ತಕರು ಮತ್ತು ಕೈಗಾರಿಕೋದ್ಯಮಿಗಳ ಸಂಘದಿಂದ ಅರವತ್ಮೂರನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವರ್ತಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ನಗರದ ಪ್ರಮುಖ ಬೀದಿಗಳಲ್ಲಿ ಕನ್ನಡ ಪರ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.

ಮೂರು ತಿಂಗಳಿಂದ ಹಾಲಿನ ದುಡ್ಡು ನೀಡಿಲ್ಲ ಎಂದು ಮಂಗಳವಾರಪೇಟೆ ಹೈನುಗಾರರಿಂದ ಪ್ರತಿಭಟನೆ
ಮೂರು ತಿಂಗಳಿಂದ ಹಾಲಿನ ದುಡ್ಡು ನೀಡಿಲ್ಲ ಎಂದು ಮಂಗಳವಾರಪೇಟೆ ಹೈನುಗಾರರಿಂದ ಪ್ರತಿಭಟನೆ

ಮೂರು ತಿಂಗಳಿನಿಂದ ಹಾಲಿನ ಬಟಾವಡೆ ಮಾಡದೆ ಹೈನುಗಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರೇವಣ್ಣ ಮತ್ತು ಅಧ್ಯಕ್ಷ ಎಂ ಎನ್ ಸತ್ಯನಾರಾಯಣ ವಿರುದ್ಧ ಹಾಲು ಉತ್ಪಾದಕರ ಸಂಘದ ಕೇಂದ್ರ ಕಛೇರಿಯಲ್ಲಿ ಮಂಗಳವಾರಪೇಟೆಯ ಹಾಲು ಉತ್ಪಾದಕರು ಇಂದು ಬೆಳಿಗ್ಗೆ ಧರಣಿ ಮಾಡಿದರು. ನವೆಂಬರ್ ಒಂದನೇ ತಾರೀಖಿಗೆ ನಮಗೆಲ್ಲಾ ಹಣ ಬಟಾವಡೆ ಮಾಡಿ ಮೂರು ತಿಂಗಳಾಗುತ್ತದೆ, ಜೀವನೋಪಾಯಕ್ಕಾಗಿ ನಾವು ಹೈನುಗಾರಿಕೆಯಿಂದ ಜೀವನ ಮಾಡುತ್ತಿದ್ದೇವೆ, ಹಾಲು ಸರಬರಾಜು ಮಾಡಿದ ಹಣ ಕ

ನಿವೃತ್ತ ನೌಕರರು ಅನುಭವದ ಗಣಿ ಕೃಷ್ಣಯ್ಯ
ನಿವೃತ್ತ ನೌಕರರು ಅನುಭವದ ಗಣಿ ಕೃಷ್ಣಯ್ಯ

ಸರ್ಕಾರಿ ನಿವೃತ್ತ ನೌಕರರಲ್ಲಿ ದೀರ್ಘಕಾಲ ಕೆಲಸ ಮಾಡಿದ ಅನುಭವವಿದೆ, ಆ ಅನುಭವವನ್ನು ಆಯಾಯ ಇಲಾಖೆಗಳಿಗೆ ಸಂಬಂಧಿಸಿದಂತೆ ತಮ್ಮ ಜ್ಞಾನಾರ್ಜನೆಯನ್ನು ಇಲಾಖೆಗಳ ಸಿಬ್ಬಂದಿಗೆ ಧಾರೆ ಎರೆದರೆ ಇಲಾಖೆಯ ಕೆಲಸ ಸರಾಗವಾಗಿ ನಡೆಯುವುದರ ಜೊತೆಗೆ ನಿವೃತ್ತರ ಆರೋಗ್ಯವೂ ಸರಿಯಾಗಿ ಲವಲವಿಕೆಯಿಂದ ಇರಬಹುದು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೃಷ್ಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.   ನಗರದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ

ದೀಪದಡಿಯಲ್ಲೇ ಕತ್ತಲು ಎಂಬಂತೆ ಕತ್ತಲಲ್ಲೇ ಮುಳುಗಿದ ನಗರಸಭೆ ! ಸುಂದರನಗರಿ ನಿರ್ಮಾಣಕ್ಕೆ ಬದ್ಧ ಪೌರಾಯುಕ್ತ?
ದೀಪದಡಿಯಲ್ಲೇ ಕತ್ತಲು ಎಂಬಂತೆ ಕತ್ತಲಲ್ಲೇ ಮುಳುಗಿದ ನಗರಸಭೆ ! ಸುಂದರನಗರಿ ನಿರ್ಮಾಣಕ್ಕೆ ಬದ್ಧ ಪೌರಾಯುಕ್ತ?

ವಿಶ್ವ ವಿಖ್ಯಾತ ಗೊಂಬೆಗಳ ನಗರಿ, ಇತಿಹಾಸ ಪುಟದಲ್ಲಿ ದಾಖಲಾಗಿರುವ ಹಲವಾರು ರಾಜರು ಮತ್ತು ಪಾಳೇಗಾರರ ರಾಜಧಾನಿ ಕೇಂದ್ರ, ಪುರಾತನ ದೇವಾಲಯಗಳ ಪಟ್ಟಣ, ಬ್ರಿಟೀಷರ ಕಾಲದ ಪೋಲಿಸ್ ಠಾಣೆಯ ಕಟ್ಟಡ, ಮಹಾತ್ಮ ಗಾಂಧಿ, ಮತ್ತು ಜಯಚಾಮರಾಜೇಂದ್ರ ಒಡೆಯರ್ ರಸ್ತೆಗಳು, ಸಣ್ಣಪುಟ್ಟ ದೇಶಗಳಿಂದ ಅಮೇರಿಕಾದ ವೈಟ್ ಹೌಸ್ ನ ವರೆಗೂ ಗೊಂಬೆಗಳಿಗೆ ಪ್ರಸಿದ್ಧಿ ಪಡೆದ ಚನ್ನಪಟ್ಟಣ ಇಂದು ಕಸದ ಸಮಸ್ಯೆಯಿಂದ ಗಬ್ಬೆದ್ದು ನಾರುತ್ತಿದೆ. ಇಂತಹ ಇತಿಹಾಸ ಹಾಗೂ ಪುರಾಣಪ್ರಸಿದ್ದ ನಗರವನ್ನು ಕಸದ ಕೊಂಪೆಯಾಗಿಸುವಲ್ಲಿ ನಗರಸಭ

Top Stories »  



Top ↑