Tel: 7676775624 | Mail: info@yellowandred.in

Language: EN KAN

    Follow us :


ಮಗಳ ಹುಟ್ಟು ಹಬ್ಬದಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ
ಮಗಳ ಹುಟ್ಟು ಹಬ್ಬದಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ

ಹುಟ್ಟುಹಬ್ಬವನ್ನು ಪಾರ್ಟಿ ನೀಡುವ ಮೂಲಕ ಇಲ್ಲವೇ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಆಚರಿಸುವುದು ವಾಡಿಕೆ. ಆದರೆ ರಾಮನಗರ ನಿವಾಸಿ ಎಸ್.ರುದ್ರೇಶ್ವರ ಹಾಗೂ ಡಿ.ಆರ್.ನೀಲಾಂಬಿಕಾ ದಂಪತಿ ತಮ್ಮ ಪುತ್ರಿ ಆರ್.ಯಶಿಕಾ 2ನೇ ಹುಟ್ಟುಹಬ್ಬವನ್ನು ಗುರುವಾರ ನೈತಿಕ ಮತದಾನ ಮಾಡುವಂತೆ ಕರಪತ್ರ ಹಂಚಿ ವಿನೂತನವಾಗಿ ಆಚರಿಸಿದರು.  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ, ಸಾಹಿತಿ ರುದ್ರೇಶ್ ಮಗಳ ಹುಟ್ಟುಹಬ್ಬವನ್ನು

ವಿಧಾನ ಸಭಾ ಚುನಾವಣೆ: ರಾಮನಗರ ಜಿಲ್ಲೆಯಲ್ಲಿ 49 ಅಭ್ಯರ್ಥಿಗಳು ಸ್ಪರ್ಧೆ

ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 49 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಶುಕ್ರವಾರ ಮಾಗಡಿಯಿಂದ 1, ಕನಕಪುರದಿಂದ 3 ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ 4 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದರು. ಕಣದಲ್ಲಿ ಉಳಿದವರ ಪೈಕಿ 43 ಮಂದಿ ಪುರುಷರಾಗಿದ್ದರೆ, 6 ಮಹಿಳೆಯರಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಿಂದ ತಲಾ 4 ಅಭ್ಯರ್ಥಿಗಳು ಕಣದಲ್ಲಿದ್ದಾರ

ಜೆಡಿಸ್ ಪಕ್ಷಕ್ಕೆ 2ಲಕ್ಷ ದೇಣಿಗೆ ನೀಡಿದ ಕೂಟಗಲ್ ನ ರೈತ ಕೃಷ್ಣಪ್ಪ
ಜೆಡಿಸ್ ಪಕ್ಷಕ್ಕೆ 2ಲಕ್ಷ ದೇಣಿಗೆ ನೀಡಿದ ಕೂಟಗಲ್ ನ ರೈತ ಕೃಷ್ಣಪ್ಪ

ರಾಮನಗರ: ರೈತರೊಬ್ಬರು ಜೆಡಿಎಸ್​ಗೆ 2 ಲಕ್ಷ ರೂ.ದೇಣಿಗೆ ನೀಡಿದರು. ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಕುಮಾರಪರ್ವ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಜಾನಪದ ಲೋಕದ ಬಳಿ ಕಸ್ತೂರಿ ಹೋಟೆಲ್​ನಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ರಾಮನಗರ ತಾಲೂಕು ಕೂಟಗಲ್​ನ ರೈತ ಕೃಷ್ಣಪ್ಪ, ತಾವು ಕೂಡಿಟ್ಟ 2 ಲಕ್ಷ ರೂಪಾಯಿಯನ್ನು ಪಕ್ಷಕ್ಕೆ ದೇಣಿಗೆಯಾಗಿ ನೀಡಿದರು. ಕುಮಾರಸ್ವಾಮಿ ಹಣ ಬೇಡವೆಂದರೂ ಹಠ ಬಿಡದ ಕೃಷ್ಣಪ್ಪ ಅಂತಿಮವಾಗಿ ಕುಮಾರಸ್ವಾಮಿ ಅವರನ್ನು ಒಪ

ಮುಸ್ಲಿಂ ಸಮುದಾಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಇಲ್ಲ : ಜಮೀರ್ ಅಹಮದ್ ಖಾನ್
ಮುಸ್ಲಿಂ ಸಮುದಾಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಇಲ್ಲ : ಜಮೀರ್ ಅಹಮದ್ ಖಾನ್

ಚನ್ನಪಟ್ಟಣ: ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಎಂ.ರೇವಣ್ಣ ಅವರ ಪರವಾಗಿ ಶಾಸಕ ಬಿ.ಜೆಡ್‌.ಜಮೀರ್‌ ಅಹಮ್ಮದ್‌ ಖಾನ್‌ ಪಟ್ಟಣದ ಮುಸ್ಲಿಂ ವಾರ್ಡುಗಳಲ್ಲಿ ರೋಡ್‌ ಷೋ ಮೂಲಕ ಪ್ರಚಾರ ನಡೆಸಿದರು. ಪಟ್ಟಣದ ಯಾರಬ್‌ನಗರ, ಕಲಾನಗರ, ಷೇರೂ ಹೋಟೆಲ್‌ ವೃತ್ತ, ಮದೀನ ಚೌಕ್‌ ರಸ್ತೆ, ಮೆಹದಿ ನಗರ, ಮಸೀದಿ, ದರ್ಗಾ, ಬಡಾಮಕನ್‌, ನಿಜಾಮ್‌ಚೌಕ್‌, ಸೈಯದ್‌ವಾಡಿ ಸೇರಿದಂತೆ ಹ

ನಾಯಕರೇ ನಿಷ್ಠಾವಂತ ಕಾರ್ಯಕರ್ತರ ಕಡೆಗಣಿಸಬೇಡಿ ವಂದಾರಗುಪ್ಪೆ ಯುವ ಜೆಡಿಎಸ್.
ನಾಯಕರೇ ನಿಷ್ಠಾವಂತ ಕಾರ್ಯಕರ್ತರ ಕಡೆಗಣಿಸಬೇಡಿ ವಂದಾರಗುಪ್ಪೆ ಯುವ ಜೆಡಿಎಸ್.

ಚನ್ನಪಟ್ಟಣ:  ಸ್ಥಳೀಯ ಹಿರಿಯ ಜೆಡಿಎಸ್ ನಾಯಕರೇ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಹಾಗೂ ವರಿಷ್ಠ ರಿಗೆ ಅವರದೇ ಆದಂತಹ ಮತದಾರರು ಅಭಿಮಾನಿಗಳು ಇದ್ದೇ ಇದ್ದಾರೆ, ಅದು ನಾಯಕರಾದ ನಿಮಗೂ, ವರಿಷ್ಠರಿಗೂ ಹಾಗೂ ಚನ್ನಪಟ್ಟಣದ ಎಲ್ಲಾ ಪಕ್ಷದ ನಾಯಕರು ಕಾರ್ಯಕರ್ತರು ಮತ್ತು ಮತದಾರ ಪ್ರಭುಗಳೆಲ್ಲರಿಗೂ ಗೊತ್ತಿರುವ ಸತ್ಯಸಂಗತಿ. ಚನ್ನಪಟ್ಟಣದ ಜೆಡಿಎಸ್ ರಾಜಕಾರಣದಲ್ಲಿ ವರದೇಗೌಡರ ನಂತರ ಎಂ ಸಿ ಅಶ್ವಥ್ ಕೆಲವು ತಿಂಗಳು ಕಾಲ ಶಾಸಕರಾಗಿದ್ದು ಹೊರತ

ಬಿಜೆಪಿ ಬಿ ಫಾರಂ ಕೊಡುವುದು ಕುಮಾರಸ್ವಾಮಿ : ಬಾಲಕೃಷ್ಣ ಲೇವಡಿ
ಬಿಜೆಪಿ ಬಿ ಫಾರಂ ಕೊಡುವುದು ಕುಮಾರಸ್ವಾಮಿ : ಬಾಲಕೃಷ್ಣ ಲೇವಡಿ

ಮಾಗಡಿ: ಬಿಜೆಪಿಯ ಬಿ ಫಾರಂ ಕೊಡುವುದು ಬಿ.ಎಸ್‌.ಯಡಿಯೂರಪ್ಪ ಅಲ್ಲ. ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಬಾಲಕೃಷ್ಣ ಲೇವಡಿ ಮಾಡಿದರು. ತಾಲೂಕಿನ ಕಲ್ಯಾ, ಸಾತನೂರು, ಉಪ್ಪಾರ್ತಿ, ಬಸನಪಾಳ್ಯ ಇತರೆಡೆ ಮನೆ ಮನೆಗೆ ತೆರಳಿ ಮತಯಾಚಿಸಿದ ಅವರು, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರಂಗಧಾಮಯ್ಯ ಅವರಿಗೆ ಟಿಕೆಟ್‌ ನೀಡಬೇಕಿತ್ತು. ರಂಗಧಾಮಯ್ಯ ಅವರಿಗೆ ಟಿಕೆ

619 ಕೋಟಿ ಒಡೆಯ ಡಿ.ಕೆ. ಶಿವಕುಮಾರ್
619 ಕೋಟಿ ಒಡೆಯ ಡಿ.ಕೆ. ಶಿವಕುಮಾರ್

ರಾಮನಗರ: ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ಗುರುವಾರ ನಾಮಪತ್ರ ಸಲ್ಲಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಮ್ಮ ಆಸ್ತಿ ಘೋಷಿಸಿಕೊಂಡಿದ್ದು, ಸಚಿವರ ಬಳಿ ಒಟ್ಟು 619 ಕೋಟಿ ರೂ. ಮೌಲ್ಯದ ಚರಾಸ್ಥಿ ಮತ್ತು ಸ್ಥಿರಾಸ್ಥಿ ಇದೆ. 2013ರ ಚುನಾವಣೆಯಲ್ಲಿ ಇವರ ಬಳಿ 251 ಕೋಟಿ ರೂ. ಚರ ಮತ್ತು ಸ್ಥಿರಾಸ್ಥಿ ಇತ್ತು. ಕಳೆದ 5 ವರ್ಷಗಳಲ್ಲಿ ಇವರ ಸ್ಥಿರಾಸ್ಥಿ 377 ಕೋಟಿ ರೂ.ಗಳಷ್ಟು ಬೆಲೆ ಹ

ಕುಮಾರಸ್ವಾಮಿ ಗಿಂತ ಅನಿತಾ ಕುಮಾರಸ್ವಾಮಿ ಶ್ರೀಮಂತೆ
ಕುಮಾರಸ್ವಾಮಿ ಗಿಂತ ಅನಿತಾ ಕುಮಾರಸ್ವಾಮಿ ಶ್ರೀಮಂತೆ

ರಾಮನಗರ: ಮೊದಲು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ನಂತರ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಕುಮಾಸ್ವಾಮಿ ಅವರಿಗಿಂತ ಅವರ ಪತ್ನಿ ಅನಿತಾ ಅವರದ್ದೇ ಹೆಚ್ಚು ಆಸ್ತಿ ಇದೆ ಎಂದು ನಾಮಪತ್ರದಲ್ಲಿ ನಮೂದಿಸಿದ್ದಾರೆ. ಆಸ್ತಿ ವಿವರದ ಮಾಹಿತಿ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಕುಟುಂಬದ ಬಳಿ 167.14 ಕೋಟಿ ರೂ. ಚರಾಸ್ತಿ ಮತ್ತು ಸ್ಥಿರಾಸ್ತಿ ಇದೆ. ಈ ಪ

ಯೋಗೇಶ್ವರ್ ಮಂತ್ರಿಯಾಗುವುದಿಲ್ಲ, ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗುವುದಿಲ್ಲ :ಡಿ.ಕೆ. ಶಿವಕುಮಾರ್
ಯೋಗೇಶ್ವರ್ ಮಂತ್ರಿಯಾಗುವುದಿಲ್ಲ, ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗುವುದಿಲ್ಲ :ಡಿ.ಕೆ. ಶಿವಕುಮಾರ್

ಚನ್ನಪಟ್ಟಣ: ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಸೆಯಿದೆ. ಆದರೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನನ್ನಾಗಿ ಮಾಡಿ ಪಕ್ಷ ಕೈಕಟ್ಟಿಹಾಕಿದೆ. ಅಭ್ಯರ್ಥಿ ಎಚ್‌.ಎಂ.ರೇವಣ್ಣ ಅವರನ್ನು ಹೈಕಮಾಂಡ್‌ ಆಯ್ಕೆ ಮಾಡಿದ್ದು ಅವರನ್ನು ಗೆಲ್ಲಿಸುವ ಮೂಲಕ ಶಕ್ತಿ ತೋರಿ ಸಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಕಾರ್ಯಕರ್ತರಿಗೆ ಸಲಹೆ ನೀಡಿದರು. ಪಟ್ಟಣದ ಸಾತನೂರು ರಸ್ತೆಯ ಮಹದೇಶ್ವರ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿದ್ದ ಕಾರ

ನಿತ್ಯಾನಂದಸ್ವಾಮಿ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್

ರಾಮನಗರ: ಇಂಧನ ಸಚಿವ ಡಿ.ಕೆ. ಶಿವಕುಮಾರ್​ ಅವರು ಬುಧವಾರ ನಿತ್ಯಾನಂದ ಧ್ಯಾನಪೀಠಕ್ಕೆ ಭೇಟಿ ನೀಡಿ ಸ್ವಾಮಿ ನಿತ್ಯಾನಂದ ಆಶೀರ್ವಾದ ಪಡೆದಿರುವ ಫೋಟೋ ಇದೀಗ ವೈರಲ್​​ ಆಗಿದೆ. ಬಿಡದಿಯಲ್ಲಿರುವ ಧ್ಯಾನಪೀಠಕ್ಕೆ ಭೇಟಿ ನೀಡಿ ನಿತ್ಯಾನಂದ ಸ್ವಾಮೀಜಿಗೆ ಶಾಲು ಹೊದಿಸಿ ಆಶೀರ್ವಾದ ಪಡೆದು ಅರ್ಧ ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಆಶೀರ್ವಾದ ಪಡೆದರು.

Top Stories »  



Top ↑