Tel: 7676775624 | Mail: info@yellowandred.in

Language: EN KAN

    Follow us :


ನೂರು ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾದ ಹೊನ್ನನಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ
ನೂರು ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾದ ಹೊನ್ನನಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ

ಚನ್ನಪಟ್ಟಣ:ಮಾ/೩೧/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ವೈರಸ್ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಗಡಿಭಾಗದ ಹೊನ್ನನಾಯಕನಹಳ್ಳಿ ಹೊರ ಭಾಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯನ್ನು ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ರಾಜು ರವರು ತಿಳಿಸಿದರು.ಸದ್ಯ ತಾಲ್ಲೂಕಿನಾದ್ಯಂತ ಇದುವರೆಗೂ ಕೊರೊನಾ ಗೆ ಸಂಬಂ

ಅಗ್ನಿಶಾಮಕ ದಳದ ಜೊತೆಗೂಡಿ ಔಷಧ ಸಿಂಪಡಿಸುತ್ತಿರುವ ನಗರಸಭೆ
ಅಗ್ನಿಶಾಮಕ ದಳದ ಜೊತೆಗೂಡಿ ಔಷಧ ಸಿಂಪಡಿಸುತ್ತಿರುವ ನಗರಸಭೆ

ಚನ್ನಪಟ್ಟಣ:ಮಾ/೩೦/೨೦/ಸೋಮವಾರ. ಕರೋನಾ (ಕೋವಿಡ್-೧೯) ವೈರಸ್ ನಿಂದ ಮುಂದಾಗುವ ತೊಂದರೆಯನ್ನು ತಪ್ಪಿಸಿಕೊಳ್ಳಲು ನಗರಸಭೆಯು ಔಷಧ ಸಿಂಪಡಣೆ ಮಾಡಲು ತಾಲ್ಲೂಕು ಅಗ್ನಿಶಾಮಕ ದಳದ ಮೊರೆ ಹೋಗಿದ್ದು ಇಂದು ನಗರದ ಜನ ವಸತಿ ಪ್ರದೇಶಗಳಲ್ಲಿ ಔಷಧವನ್ನು ಸಿಂಪಡಿಸಲಾಯಿತು.ನಗರಸಭೆಯ ಪೌರಾಯುಕ್ತ ಶಿವನಂಕಾರಿಗೌಡ ರ ಮನವಿಗೆ ಸ್ಪಂದಿಸಿದ ಅಗ್ನಿಶಾಮಕ ಠಾಣೆಯ ಅಧಕಾರಿ ವಿಷಕಂಠಯ್ಯನವ

ವಂದಾರಗುಪ್ಪೆ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಎಫ್ಐಆರ್ ದಾಖಲು
ವಂದಾರಗುಪ್ಪೆ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಎಫ್ಐಆರ್ ದಾಖಲು

ಚನ್ನಪಟ್ಟಣ:ಮಾ/೨೯/೨೦/ಭಾನುವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದ ಕಣ್ವ ರಸ್ತೆಯಲ್ಲಿರುವ ಖಾಸಗಿಯವರ ತೆಂಗಿನ ತೋಟವೊಂದರಲ್ಲಿ ಜೂಜು ಆಡುತ್ತಿದ್ದವರ ಮೇಲೆ ಡಿವೈಎಸ್ಪಿ ಓಂಪ್ರಕಾಶ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಶಿವಕುಮಾರ್ ರವರ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಪೋಲಿಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜೂಜು ಆಡುತ್ತಿದ್ದವರಲ್ಲಿ ಶಿವರುದ್ರಯ್

ಬೀದಿಗೆ ಬಂದ ಹೋಂ ಕ್ವಾರಂಟೈನ್ ಚಿತ್ರ ವೈರಲ್, ದಿಗಿಲುಬಿದ್ದ ಸಾರ್ವಜನಿಕರು, ದೂರು ದಾಖಲು
ಬೀದಿಗೆ ಬಂದ ಹೋಂ ಕ್ವಾರಂಟೈನ್ ಚಿತ್ರ ವೈರಲ್, ದಿಗಿಲುಬಿದ್ದ ಸಾರ್ವಜನಿಕರು, ದೂರು ದಾಖಲು

ಚನ್ನಪಟ್ಟಣ:ಮಾ/೨೯/೨೦/ಭಾನುವಾರ.ನಗರದ ಕಲಾನಗರದಲ್ಲಿ ಹದಿನಾಲ್ಕು ದಿನಗಳ ಕಾಲ ಕೊರೊನಾ ಶಂಕಿತ ಹೋಂ ಕ್ವಾರಂಟೈನ್ ನಲ್ಲಿದ್ದ ಅಮಾನುಲ್ಲಾ ಖಾನ್ ರವರ ಪುತ್ರ ಸಹೀದ್ ಅಮಾನ್ (೩೨) ಎಂಬ ಯುವಕನೋರ್ವ ನಗರದ ಬೀದಿಗಿಳಿದಿದ್ದು, ಆತನ ಮುಂಗೈ ಮೇಲೆ ಮುದ್ರೆಯಿದ್ದ ಕಾರಣ ಸ್ಥಳದಲ್ಲಿದ್ದ ಸಾರ್ವಜನಿಕರು ಚಿತ್ರ ತೆಗೆದಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಸಹೀದ್ ಅಮಾನ್ ಅಬುಧಾಬಿ ಯಿಂದ ಬಂದಿದ್ದರಿಂದ ಆತನನ

ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ದೂರು ಸಲ್ಲಿಸಿ
ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ದೂರು ಸಲ್ಲಿಸಿ

ರಾಮನಗರ:ಮಾ/೨೯/೨೦/ಭಾನುವಾರ. ರಾಮನಗರ ಜಿಲ್ಲೆಯಲ್ಲಿ ಕೋರೋನಾ ವೈರಸ್ (ಕೊವೀಡ್-೧೯) ತಡೆಗಟ್ಟುವ ಸಲುವಾಗಿ ರಾಮನಗರ ಜಿಲ್ಲೆಯಾದ್ಯಂತ ಮಾ ೩೧ ರವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಇತ್ಯಾದಿಗಳನ್ನು ನಿಷೇಧಿಸಿರುತ್ತಾರೆ.ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಸಂಗ್ರಹ, ಮಾರಾಟ, ಹಂಚಿಕೆ ಮತ್ತು ಸಾಗಾಣ

ಗ್ರಾಮದವರ ಮನೆ ಬಾಗಿಲಿಗೆ ಅಡುಗೆ ಸಾಮಗ್ರಿ ಒದಗಿಸಲು ಚಕ್ಕೆರೆ ಪಂಚಾಯತಿಯಿಂದ ಸಿದ್ಧತೆ
ಗ್ರಾಮದವರ ಮನೆ ಬಾಗಿಲಿಗೆ ಅಡುಗೆ ಸಾಮಗ್ರಿ ಒದಗಿಸಲು ಚಕ್ಕೆರೆ ಪಂಚಾಯತಿಯಿಂದ ಸಿದ್ಧತೆ

ಕೋವಿಡ್-೧೯ ಹರಡದಂತೆ ೨೧ ದಿನಗಳ ಕಾಲ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಸಾರ್ವಜನಿಕರು ತಮಗೆ ಬೇಕಿರುವ ಅಡುಗೆ ಸಾಮಗ್ರಿಗಳನ್ನು ಪಡೆಯಲು ಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಡೆಯಲು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮ ಪಂಚಾಯಿತಿಯಿಂದ ಮನೆ ಬಾಗಿಲಿಗೆ ಅಡುಗೆ ಸಾಮಗ್ರಿಗಳನ್ನು ತಲುಪಿಸಲು ಪ್ರಯತ್ನ ನಡೆಸಲಾಗುತ್ತಿದೆ.ಗ್ರಾಮದಲ್ಲಿ ಪಡಿತರ ಅಂಗಡಿಗಳಿಂದ ಅಕ್ಕಿ ಮತ್ತು ರಾಗಿಯನ್ನು ಮಿತವ್ಯಯವಾಗಿ

ನಡಿಗೆಯ ಮೂಲಕ ಬಳ್ಳಾರಿ ತಲುಪುತ್ತಿರುವ ವಲಸಿಗರು. ಊಟ ವಸತಿ‌ ಕಲ್ಪಿಸುತ್ತೇವೆ ಇರಿ ಎಂದ ಅಧಿಕಾರಿಗಳು
ನಡಿಗೆಯ ಮೂಲಕ ಬಳ್ಳಾರಿ ತಲುಪುತ್ತಿರುವ ವಲಸಿಗರು. ಊಟ ವಸತಿ‌ ಕಲ್ಪಿಸುತ್ತೇವೆ ಇರಿ ಎಂದ ಅಧಿಕಾರಿಗಳು

ಚನ್ನಪಟ್ಟಣ: ರಾಮನಗರ ಜಿಲ್ಲೆಯಲ್ಲಿ ೪ ಸಾವಿರ ಮಂದಿ ವಲಸೆ ಬಂದ ಕೂಲಿ ಕಾರ್ಮಿಕರು ನೆಲೆಸಿದ್ದು ಚನ್ನಪಟ್ಟಣ ದಲ್ಲಿ ಒಂದು ಸಾವಿರದ ಇನ್ನೂರು ಮಂದಿ ನಗರದ ಸಾತನೂರು ರಸ್ತೆಯ ಆಜೂಬಾಜಿನಲ್ಲಿ ಟೆಂಟ್ ನಿರ್ಮಿಸಿಕೊಂಡು ವಾಸವಿದ್ದರು.ಕರೋನಾ ವೈರಸ್ ನಿಂದ ಕರ್ನಾಟಕ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ, ಇತ್ತ ಊಟಕ್ಕೂ ಪರದಾಡುವಂತಾಗಿದ್ದು ತಮ್ಮ ಊರಿಗೆ ಹಿಂದಿರ

ದಿನಗೂಲಿ, ಭಿಕ್ಷುಕ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾಮಾನ್ಯ ನಾಗರೀಕರು
ದಿನಗೂಲಿ, ಭಿಕ್ಷುಕ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾಮಾನ್ಯ ನಾಗರೀಕರು

ಚನ್ನಪಟ್ಟಣ:ಮಾ/೨೭/೨೦/ಶುಕ್ರವಾರ.ನಗರದ ಹೊರವಲಯದಲ್ಲಿ ಕೂಲಿಗಾಗಿ ವಲಸೆ ಬಂದು ಗುಡಿಸಲು ಹಾಕಿಕೊಂಡಿರುವವರಿಗೆ, ಬಾಗಿಲು ಮುಚ್ಚಿದ ದೇವಾಲಯದ ಬಳಿಯ ಭಿಕ್ಷುಕರಿಗೆ, ದಾರಿಯಲ್ಲಿ ಅಂಡೆಲೆಯುತ್ತಿದ್ದ ಮಾನಸಿಕ ಖಾಯಿಲೆಯವರಿಗೆ ನಗರದ ಕೆಲ ಯುವಕರು ಗುಂಪು ಮಾಡಿಕೊಂಡು ಊಟದ ವ್ಯವಸ್ಥೆ ಮಾಡಿ ಹಂಚಿಕೆ ಮಾಡುವ ಮೂಲಕ ಮಾನವೀಯತೆ ಮೆರೆದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್)

ಯುಗಾದಿ ಹೊಸತೊಡಕಿಗೆ ಅಡ್ಡಿಯಾಗದ ಕರೋನ, ಎಚ್ಚರಿಕೆಯ ನಡೆ ಇರಿಸಿದ ಮಾಂಸಪ್ರಿಯರು
ಯುಗಾದಿ ಹೊಸತೊಡಕಿಗೆ ಅಡ್ಡಿಯಾಗದ ಕರೋನ, ಎಚ್ಚರಿಕೆಯ ನಡೆ ಇರಿಸಿದ ಮಾಂಸಪ್ರಿಯರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಶಾರ್ವರಿ ಸಂವತ್ಸರದ ಯುಗಾದಿ ಹಬ್ಬದ ಮೊದಲ ಸಿಹಿಯೂಟ ಸರಳವಾಗಿ ನಡೆದರೆ ಮಾರನೆಯ ದಿನದ ಹೊಸತೊಡಕು ಹಬ್ಬವೂ ವಿಜೃಂಭಣೆಯಿಂದಲೇ ನಡೆಯಿತು.ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಆರ್ಡರ್ ನಂ ೪೦-೩/೨೦ಡಿ ೪ ಪ್ರಕಾರ ಜಿಲ್ಲಾಡಳಿತವು ಕೆಲ ನಿಬಂಧನೆಗಳನ್ನು ವಿಧಿಸಿ ಮಾಂಸ, ಮೀನು ಮತ್ತು ಕೋಳಿ ಮಾಂಸದಂಗಡಿಗಳಿಗೆ ಅನುಮತಿ ನೀಡಿದ್ದರಿಂದ ಮಾಂಸಪ್ರಿಯರು

ನಾಳೆ ಮಾಂಸದಂಗಡಿಗಳಿಗೆ ಎಚ್ಚರಿಕೆಯ ಪರ್ಮಿಷನ್ ನೀಡಿದ ಅಧಿಕಾರಿಗಳು
ನಾಳೆ ಮಾಂಸದಂಗಡಿಗಳಿಗೆ ಎಚ್ಚರಿಕೆಯ ಪರ್ಮಿಷನ್ ನೀಡಿದ ಅಧಿಕಾರಿಗಳು

ಚನ್ನಪಟ್ಟಣ: ಯುಗಾದಿ ಹಬ್ಬದ ಮಾರನೆಯ ದಿನ ನಡೆಯುವ ಹೊಸತೊಡಕು ಗಿಗೆ ಅನುಕೂಲವಾಗುವಂತೆ ಹಾಗೂ ಮಾಂಸ ಪ್ರಿಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಮಾಂಸ ಮತ್ತು ಕೋಳಿ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ.ನಗರದ ಬಹುತೇಕ ಮಾಂಸದಂಗಡಿಗಳ ಮನವಿ ಮೇರೆಗೆ ಅವಕಾಶ ನೀಡಿರುವ ತಾಲ್ಲೂಕು ಆಡಳಿತವು ಒಮ್ಮೆಲೆ ಗ್ರಾಹಕರು ಮುಗಿಬೀಳದಂತೆ, ಕನಿಷ್ಠ ಒಂದು ಮೀಟರ್ ವೃತ್ತ (ಸರ್ಕಲ್) ಹಾಕ

Top Stories »  



Top ↑