Tel: 7676775624 | Mail: info@yellowandred.in

Language: EN KAN

    Follow us :

ಗಾಂಧಿಗೆ 151 ಆದರೂ,  ಶಿಥಿಲಾವಸ್ಥೆಯಲ್ಲೇ ಮುಂದುವರೆದ ಗಾಂಧಿಭವನ
ಗಾಂಧಿಗೆ 151 ಆದರೂ, ಶಿಥಿಲಾವಸ್ಥೆಯಲ್ಲೇ ಮುಂದುವರೆದ ಗಾಂಧಿಭವನ

ಚನ್ನಪಟ್ಟಣ:ಅ/01/20/ಗುರುವಾರ. ನಗರದ ಹೃದಯ ಭಾಗದಲ್ಲಿರುವ ಗಾಂಧಿಭವನವನ್ನು ಸ್ವಾತಂತ್ರ್ಯ ಪೂರ್ವದಲ್ಲಿ, ಗಾಂಧೀಜಿಯವರ ಭೇಟಿಯ ನೆನಪಿಗಾಗಿ ನಿರ್ಮಿಸಿ, ಇಂದು ಶಿಥಿಲಾವಸ್ಥೆ ತಲುಪಿರುವ ಗಾಂಧಿಭವನಕ್ಕೆ ಕಾಯಕಲ್ಪ ನೀಡದಿರುವುದರಿಂದ ಭೂತ ಬಂಗಲೆಯಾಗಿ ಪರಿವರ್ತಿತಗೊಂಡಿದೆ.ಕಳೆದ ವರ್ಷ ಅಂದರೆ 150 ನೇ ಗಾಂಧಿ ಜಯಂತಿಯಂದು ಹಿರಿಯ ಪತ್ರಕರ್ತ ಸು ತ ರಾಮೇಗೌಡ ಮತ್ತು ಗೋ ರ

ಕಾಲುವೆ ರಸ್ತೆ ಒತ್ತುವರಿ ತೆರವುಗೊಳಿಸಿ ನಮ್ಮ ಜಮೀನಿಗೆ ಹೋಗಲು ದಾರಿಬಿಡಿಸಿ ಎಂದು ಮನವಿ ಸಲ್ಲಿಸಿದ ಮೈಲನಾಯಕನಹಳ್ಳಿ ಗ್ರಾಮಸ್ಥರು
ಕಾಲುವೆ ರಸ್ತೆ ಒತ್ತುವರಿ ತೆರವುಗೊಳಿಸಿ ನಮ್ಮ ಜಮೀನಿಗೆ ಹೋಗಲು ದಾರಿಬಿಡಿಸಿ ಎಂದು ಮನವಿ ಸಲ್ಲಿಸಿದ ಮೈಲನಾಯಕನಹಳ್ಳಿ ಗ್ರಾಮಸ್ಥರು

ಚನ್ನಪಟ್ಟಣ:ಸೆ/30/20/ಬುಧವಾರ. ಪುರಾತನ ಕಾಲದಿಂದಲೂ ಅನೋನ್ಯವಾಗಿ ಒಬ್ಬರ ಜಮೀನಿನ ಮೇಲೆ ಮತ್ತೊಬ್ಬರು ಓಡಾಡುವ ಮೂಲಕ ಜೀವನ ಮಾಡುತ್ತಿದ್ದ ನಾವು ಕೆಲವು ಒತ್ತುವರಿದಾರರ ಕಿರುಕುಳದಿಂದ ನಮ್ಮ ಭೂಮಿಗೆ ಹೋಗಿ ವ್ಯವಸಾಯ ಮಾಡಲಾಗದೆ ಪರಿತಪಿಸುವಂತಾಗಿದೆ. ತಾಲ್ಲೂಕಿನ ದಂಡಾಧಿಕಾರಿಗಳಾದ ತಾವು ಒತ್ತುವರಿ ತೆರವು ಮಾಡಿಸಿ ನಕಾಸೆ ರಸ್ತೆಯನ್ನು ಗುರುತಿಸಿ ನಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಲು ಅನುವು ಮಾಡ

ಗಾಂದಿಭವನ ಮರುನಿರ್ಮಿಸಲು ಕರವೇ ಮನವಿ
ಗಾಂದಿಭವನ ಮರುನಿರ್ಮಿಸಲು ಕರವೇ ಮನವಿ

ಚನ್ನಪಟ್ಟಣ:ಸೆ/30/20/ಬುಧವಾರ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿಯವರು ಭೇಟಿ ನೀಡಿದ ನೆನಪಿಗಾಗಿ ನಿರ್ಮಿಸಲಾದ ಗಾಂಧಿಭವನವು ಇಂದು ಶಿಥಿಲಾವಸ್ತೆಗೊಂಡಿದ್ದು, ತಾಲ್ಲೂಕು ಮತ್ತು ಜಿಲ್ಲಾಡಳಿತವು ಶೀಘ್ರವಾಗಿ  ಪರಿಶೀಲಿಸಿ, ತಮ್ಮ ಸುಪರ್ದಿಗೆ ಪಡೆದು ಮರುನಿರ್ಮಿಸಿ ಗಾಂಧೀಜೀಯವರ ನೆನಪನ್ನು ಅಜರಾಮರವಾಗಿಸಬೇಕೆಂಬ ಬೇಡಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಪದಾಧಿಕಾರಿಗಳು

ವಿಶ್ವದ ಬಹುತೇಕ ಯುದ್ದಗಳಲ್ಲಿ ನಿಸ್ವಾರ್ಥ ಸೇವೆ ನೀಡಿದ ಏಕೈಕ ಸಂಸ್ಥೆ ರೆಡ್‌ ಕ್ರಾಸ್‌: ತಹಶಿಲ್ದಾರ್ ನಾಗೇಶ್
ವಿಶ್ವದ ಬಹುತೇಕ ಯುದ್ದಗಳಲ್ಲಿ ನಿಸ್ವಾರ್ಥ ಸೇವೆ ನೀಡಿದ ಏಕೈಕ ಸಂಸ್ಥೆ ರೆಡ್‌ ಕ್ರಾಸ್‌: ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಸೆ/29/20/ಮಂಗಳವಾರ. ವಿಶ್ವದ ಬಹುತೇಕ ಎಲ್ಲಾ ಯುದ್ದಗಳಲ್ಲೂ, ಗಾಯಗೊಂಡ ಸೈನಿಕರಿಗೆ ರಕ್ತ ಪೂರೈಸುವ ಮೂಲಕ, ನಿಸ್ವಾರ್ಥ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಏಕೈಕ ಸಂಸ್ಥೆ ಎಂದರೆ ಅದು ರೆಡ್ ಕ್ರಾಸ್ ಸಂಸ್ಥೆ ಎಂದು ತಾಲ್ಲೂಕು ದಂಡಾಧಿಕಾರಿ ನಾಗೇಶ್ ತಿಳಿಸಿದರು.ಅವರು ಇಂದು ನಗರದ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹೃದಯದ ದಿನ ದ

ರಾಮನಗರ ಟೂರಿಸಂ ಫೋಟೊ ಕಾಂಟೆಸ್ಟ್ 2020 ರಲ್ಲಿ ವಿಜೇತರಿಗೆ ಪ್ರಶಸ್ತಿಪತ್ರ & ನಗದು ಬಹುಮಾನ ವಿತರಿಸಿದ - ರಾಮನಗರ ಜಿ.ಪಂ. ಸಿ.ಇ.ಒ ಇಕ್ರಮ್
ರಾಮನಗರ ಟೂರಿಸಂ ಫೋಟೊ ಕಾಂಟೆಸ್ಟ್ 2020 ರಲ್ಲಿ ವಿಜೇತರಿಗೆ ಪ್ರಶಸ್ತಿಪತ್ರ & ನಗದು ಬಹುಮಾನ ವಿತರಿಸಿದ - ರಾಮನಗರ ಜಿ.ಪಂ. ಸಿ.ಇ.ಒ ಇಕ್ರಮ್

ರಾಮನಗರ ಜಿಲ್ಲಾ ಪಂಚಾಯಿತಿಯು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿರುವ ಪ್ರವಾಸಿ ಸ್ಥಳಗಳನ್ನು ಹುಡುಕಲು ಫೇಸ್‌ಬುಕ್‌ನಲ್ಲಿ ಜುಲೈ 24 ರಂದು ಛಾಯಚಿತ್ರ ಸ್ಪರ್ಧೆಗೆ ಚಾಲನೆ ನೀಡಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಳ್ಳುವ ಮೂಲಕ ಸುಮಾರು 500 ಕ್ಕೂ ಹೆಚ್ಚು ಪೋಟೊಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಛಾಯಚಿತ್ರ ಸ್ಪರ್ಧೆ ರಾಮನಗರದ ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್  ಸಹಕಾರ ನೀಡಿದೆ ಜೊತೆಗೆ  ಟೆಕ್ನಿಕ

ತಮ್ಮ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ ದೂರು ದಾಖಲು
ತಮ್ಮ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ ದೂರು ದಾಖಲು

ಚನ್ನಪಟ್ಟಣ:ಸೆ/28/20/ಸೋಮವಾರ. ತಮ್ಮ ಸ್ವಂತ ನಿವೇಶನದಲ್ಲಿ ಅನಧಿಕೃತವಾಗಿ ಕಾಂಪೌಂಡ್ ನಿರ್ಮಿಸುತ್ತಿರುವುದನ್ನು ಪ್ರಶ್ನಿಸಿದ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ತಮ್ಮ ನಿವೇಶನಕ್ಕೆ ಹೊಂದಿಕೊಂಡಂತೆ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ತಡೆಯಲು ಹೋದ ಪತಿ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಗಾಯಗೊ

“ಮೂಲೆಮನೆ “ ಕೋವಿಡ್-19 ಜಾಗೃತಿ ಮೂಡಿಸುವ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ
“ಮೂಲೆಮನೆ “ ಕೋವಿಡ್-19 ಜಾಗೃತಿ ಮೂಡಿಸುವ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ

ರಾಮನಗರದ ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಮತ್ತು ಮಿಷನ್ ಚಾಯ್ ಸಂಸ್ಥೆಗಳು ಒಟ್ಟುಗೂಡಿ ಜನರಿಗೆ ಕೋವಿಡ್ ೧೯ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರ ನಿರ್ಮಾಣ ಮಾಡಿದೆ. ಈ ಚಿತ್ರ ನಿರ್ಮಾಣಕ್ಕೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ ಸಂಪೂರ್ಣ ಸಹಕಾರ ನೀಡಿದೆ. ಜಿಲ್ಲಾ ಮಲೇರಿಯಾ ಅಧಿಕಾರಿಯಾಗಿರುವ  ಡಾ||. ಪ್ರಸನ್ನಕುಮಾರ

ಚನ್ನಪಟ್ಟಣದ ಗಿರೀಶ್ ಗೆ ವಿಕ್ಟೋರಿಯಾ ಆಸ್ಪತ್ರೆಯ ಕಾಯಕಲ್ಪ ಪ್ರಶಸ್ತಿ
ಚನ್ನಪಟ್ಟಣದ ಗಿರೀಶ್ ಗೆ ವಿಕ್ಟೋರಿಯಾ ಆಸ್ಪತ್ರೆಯ ಕಾಯಕಲ್ಪ ಪ್ರಶಸ್ತಿ

ಚನ್ನಪಟ್ಟಣ/ಬೆಂಗಳೂರು:ಸೆ/24/20/ಗುರುವಾರ.ಚನ್ನಪಟ್ಟಣ ನಗರದ ಡಿ ಟಿ ರಾಮು ವೃತ್ತದ ಬಳಿಯ ಈಡಿಗರ ಬೀದಿಯ ಗಿರೀಶ್ ರವರು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಅವರಿಗೆ 2018-19 ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ದೊರೆತಿದೆ.ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಕೆಲ ಆಸ್ಪತ್ರೆಗಳಿಗೆ ರೋಗಿಗಳು ಸಹ ಹೋಗಲು

ಹತ್ತನೇ ತರಗತಿಯ ಪೂರಕ ಪರೀಕ್ಷೆಯ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಕೊರೊನಾ ಜಾಗೃತಿ
ಹತ್ತನೇ ತರಗತಿಯ ಪೂರಕ ಪರೀಕ್ಷೆಯ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಕೊರೊನಾ ಜಾಗೃತಿ

ಚನ್ನಪಟ್ಟಣ:ಸೆ/23/20/ಬುಧವಾರ. ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಹತ್ತನೇ ತರಗತಿಯ ಪೂರಕ ಪರೀಕ್ಷೆಗೆ ಹಾಜರಾದ ಮಕ್ಕಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಕೊರೊನಾ ಜಾಗೃತಿಯನ್ನು ಮೂಡಿಸಿದರು.ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವ ಮುನ್ನಾ ಸಂಸ್ಥೆಯ ಸ್ವಯಂ ಸೇವಕರು ಪರೀಕ್ಷಾ ಕೇಂದ್ರದ ನೋ

ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ
ದಲಿತ ಸಮುದಾಯದ ಶವ ಹೂಳಲು ಜಾಗವಿಲ್ಲ ಎಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

ಚನ್ನಪಟ್ಟಣ:ಸೆ/22/20/ಮಂಗಳವಾರ.ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ದಲಿತರು ಸಾವನ್ನಪ್ಪಿದರೆ ಶವ ಹೂಳಲು ಸ್ಮಶಾನವಿಲ್ಲ. ಇದೊಂದೆ ಗ್ರಾಮವಲ್ಲದೆ ತಾಲ್ಲೂಕಿನಾದ್ಯಂತ ದಲಿತರು ಇರುವ ಅನೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲ. ಎಂದು ಇಂದು ದೇವರಹೊಸಹಳ್ಳಿ ಗ್ರಾಮದಲ್ಲಿ ಸಾವನ್ನಪ್ಪಿದ ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ತಾಲ್ಲೂಕಿನ ದಲಿತ ಮುಖಂಡರು, ತಾಲೂಕು ಆಡಳಿತ ಅಂತ್ಯಕ್ರಿಯೆಗೆ ಜಾಗ ತೋರಿ

Top Stories »  

Top ↑